ಚಿತ್ರ ಆಧಾರಿತ ರೋಗ ಗುರುತಿಸುವಿಕೆ ಮತ್ತು ಶಿಫಾರಸುಗಳು:
ವೈಶಿಷ್ಟ್ಯದ ಉದ್ದೇಶ
ಆ್ಯಪ್ ನಲ್ಲಿ ಈ ವೈಶಿಷ್ಟ್ಯದ ಮುಖ್ಯ ಕಾರ್ಯವೆಂದರೆ, ರೈತರಿಗೆ ರೋಗ ಅಥವಾ ಕೀಟದಿಂದ ಬಾಧಿತವಾಗಿರುವ ಸಸ್ಯಗಳು/ಸಸ್ಯ ಭಾಗಗಳ ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದು ಮತ್ತು ಅದರಲ್ಲಿನ ಸಮಸ್ಯೆಯನ್ನು ಆಧರಿಸಿ ಸ್ವಯಂಚಾಲಿತ / ವ್ಯಕ್ತಿಚಾಲಿತ ವಿಶ್ಲೇಷಣೆ ಮತ್ತು ಶಿಫಾರಸುಗಳನ್ನು ರೈತರಿಗೆ ನೀಡುವುದು.
ಈ ವೈಶಿಷ್ಟ್ಯವು, ಸ್ವಯಂಚಾಲಿತ ಚಿತ್ರ ಗುರುತಿಸುವಿಕೆ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಮೆಷಿನ್ ಲರ್ನಿಂಗ್ ಮತ್ತು ವ್ಯಕ್ತಿಚಾಲಿತ ಆಧಾರಿತ ಸಾಧನವನ್ನು ಬಳಸುತ್ತದೆ. ಈ ವೈಶಿಷ್ಟ್ಯವು, ಆ್ಯಪ್ ನ ಬಳಕೆದಾರರಿಂದ ಕಳುಹಿಸಲಾದ ಸಸ್ಯದ ರೋಗಗಳು/ಕೀಟಗಳು/ಪೋಷಕಾಂಶಗಳ ಕೊರತೆಗಳ ಚಿತ್ರಗಳನ್ನು ಮಾತ್ರ ಬಳಸುತ್ತದೆ, ಮತ್ತು ದೂರದಿಂದಲೇ ವಿಶ್ಲೇಷಿಸಿ, ಅವುಗಳನ್ನು ಗುರುತಿಸುತ್ತದೆ. ಗುರುತಿಸುವ ಪ್ರಕ್ರಿಯೆಯಲ್ಲಿ ಬೇರೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಬಳಸಲಾಗುವುದಿಲ್ಲ. ವಿಶ್ಲೇಷಣೆಯ ಫಲಿತಾಂಶಗಳು ಮತ್ತು ಬೆಳೆ ಸಂರಕ್ಷಣಾ ಉತ್ಪನ್ನಗಳ ಬಳಕೆಯ ಶಿಫಾರಸುಗಳನ್ನು ಈ ವೈಶಿಷ್ಟ್ಯದ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಪ್ರತಿಕ್ರಿಯೆ ಸಮಯ
ಆ್ಯಪ್ ನ ಬಳಕೆದಾರರು ಫೋಟೋಗಳನ್ನು ಸಲ್ಲಿಸಿದ 24 ಗಂಟೆಗಳಲ್ಲಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು. ಅಪರೂಪದ ಸಂದರ್ಭಗಳಲ್ಲಿ, ನಮ್ಮ ನಿಯಂತ್ರಣವನ್ನು ಮೀರಿ ಉದ್ಭವಿಸುವ ಯಾವುದೇ ತಾಂತ್ರಿಕ ಸಮಸ್ಯೆಗಳಿಂದಾಗಿ ಅಥವಾ ನಾವು ನಿರೀಕ್ಷಿಸುವುದಕ್ಕಿಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರ ವಿನಂತಿಗಳು ಬಂದ ಕಾರಣಗಳಿಂದಾಗಿ ಪ್ರತಿಕ್ರಿಯೆ ಬರುವಲ್ಲಿ ನಿಗದಿತ ಸಮಯಕ್ಕಿಂತ ವಿಳಂಬವಾಗಬಹುದು.
ಮಾಹಿತಿ ಸಂಸ್ಕರಣೆ
ನೀವು ಹಂಚಿಕೊಂಡ ಫೋಟೋ ಅಥವಾ ಮಾಹಿತಿಯನ್ನು ನಿಮಗೆ ಶಿಫಾರಸುಗಳನ್ನು ಒದಗಿಸುವ ಉದ್ದೇಶಕ್ಕಾಗಿ ನಾವು ಪ್ರಕ್ರಿಯೆಗೊಳಿಸುತ್ತೇವೆ. ನಮ್ಮ ಡೇಟಾಬೇಸ್ ಮತ್ತು ಆಂತರಿಕ ಜ್ಞಾನವನ್ನು ಅಭಿವೃದ್ಧಿಪಡಿಸಲು ನಾವು ಈ ಚಿತ್ರಗಳನ್ನು ಬಳಸುತ್ತೇವೆ ಮತ್ತು ಇದೇ ರೀತಿಯ ಸೇವೆಗಳನ್ನು ವಿನಂತಿಸುವ ಇತರೆ ಬಳಕೆದಾರರಿಗೆ ಶಿಫಾರಸುಗಳನ್ನು ನೀಡುವಲ್ಲಿ ನೆರವಾಗುತ್ತದೆ.
ನೀವು ಆ್ಯಪ್ ನಲ್ಲಿ ಕಳುಹಿಸಿದ ಅಥವಾ ಪೋಸ್ಟ್ ಮಾಡಿದ ಅಥವಾ ನಮಗೆ ಕಳುಹಿಸಿದ ಯಾವುದೇ ಫೋಟೋಗಳು, ಪ್ರೊಫೈಲ್ ಗಳು, ಫೋಟೋ, ವೀಡಿಯೊ, ಆಡಿಯೋ ಫೈಲ್ ಗಳು ಅಥವಾ ಇತರ ಸಾಮಗ್ರಿಗಳು ಅಥವಾ ಮಾಹಿತಿ (ಒಟ್ಟಾರೆಯಾಗಿ, "ಯೂಸರ್ ಕಂಟೆಂಟ್")ಗಳಿಗೆ ನೀವು ಜವಾಬ್ದಾರರಾಗಿದ್ದೀರಿ. ಅಂತಹ "ಯೂಸರ್ ಕಂಟೆಂಟ್"(ಬಳಕೆದಾರ ವಿಷಯ)ಗಳನ್ನು, ನಮಗೆ ಅನಿಯಮಿತ, ವಿಶ್ವಾದ್ಯಂತ, ರಾಯಲ್ಟಿ ಶುಲ್ಕ ಮುಕ್ತ, ಮತ್ತು ವರ್ಗಾವಣೆ ಮಾಡಬಹುದಾದ ಹಕ್ಕುಗಳನ್ನು ನೀಡಲು ನೀವು ಈ ಮೂಲಕ ಒಪ್ಪುತ್ತೀರಿ. ನೀವು ಪೋಸ್ಟ್ ಮಾಡಿದ ಯಾವುದೇ ವಿಷಯಗಳು, ಫೈಲುಗಳು ಮತ್ತು ಮಾಹಿತಿಗಳನ್ನು (ಯೂಸರ್ ಕಂಟೆಂಟ್)ಗಳನ್ನು ನಾವು ಬಳಸಬಹುದೆಂದು ನೀವು ಒಪ್ಪುತ್ತೀರಿ, ಇದು ಫಾರ್ಮ್ ರೈಸ್ ಗೌಪ್ಯತೆ ನೀತಿಗೆ ಅನುಗುಣವಾಗಿರುತ್ತದೆ ಮತ್ತು ಅಂತಹ ಬಳಕೆಗಾಗಿ ನೀವು ಯಾವುದೇ ಪಾವತಿ ಅಥವಾ ಇತರ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ.
ನೀವು ಸಸ್ಯ ಭಾಗದ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ, ವಿಶ್ಲೇಷಣಾ ಫಲಿತಾಂಶಗಳು, ಅಲ್ಗಾರಿದಮ್ಗಳು ಮತ್ತು ಕಾರ್ಯಕ್ಷಮತೆ, ಸ್ಥಿರತೆ, ಭದ್ರತೆ ಮತ್ತು ಅಪ್ಲಿಕೇಶನ್ನ ಬಳಕೆದಾರರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಇವುಗಳನ್ನು ಕಾನೂನುಬದ್ಧ ಆಸಕ್ತಿಯ ಆಧಾರದ ಮೇಲೆ ನಾವು ಬಳಕೆದಾರರಿಂದ ಈ ಕೆಳಗಿನ ಮಾಹಿತಿಗಳನ್ನು ಸಂಗ್ರಹಿಸುತ್ತೇವೆ. ಯಾವುದೇ ಸಂದರ್ಭಗಳಲ್ಲಿ ವೈಯಕ್ತಿಕವಾಗಿ ನಿಮ್ಮ ಬಗ್ಗೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ನಾವು ಸಂಗ್ರಹಿಸಿದ ಮಾಹಿತಿಗಳನ್ನು ಬಳಸುವುದಿಲ್ಲ.
ಬಳಕೆದಾರ/ಡಿವೈಸ್ ಐಡಿ
ಸ್ಥಳ (ಲ್ಯಾಟಿಟ್ಯೂಡ್, ಲಾಂಗಿಟ್ಯೂಡ್ )
ದಿನಾಂಕ ಮತ್ತು ಸಮಯ
ಫೋಟೊದ ಗಾತ್ರ ಮತ್ತು ಮೂಲ
ಡಿವೈಸ್ (ಬ್ರಾಂಡ್, ಹೆಸರು, ಮಾಡೆಲ್, ಓಎಸ್ & ಆ್ಯಪ್ ವರ್ಷನ್ , ಲೋಕಾಲಿಟಿ (ಐಎಸ್ಒ ಕಂಟ್ರಿ ಕೋಡ್)
ನೆಟ್ವರ್ಕ್ (ಮೊಬೈಲ್ ನೆಟ್ವರ್ಕ್ ಕಂಪನಿಯ ಹೆಸರು ಮತ್ತು ನೆಟ್ವರ್ಕ್ ಪ್ರಕಾರ)
ಬಳಕೆಯ ಹಕ್ಕುಗಳು (ಐ.ಪಿ)
ಅಪ್ಲಿಕೇಶನ್ನಲ್ಲಿನ ಎಲ್ಲಾ ಹಕ್ಕುಗಳು, ಶೀರ್ಷಿಕೆ ಮತ್ತು ಆಸಕ್ತಿ ಮತ್ತು ಎಲ್ಲಾ ಫೀಚರ್ಗಳು ಮತ್ತು ಅಪ್ಲಿಕೇಶನ್ನಲ್ಲಿನ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಇತರ ಸ್ವಾಮ್ಯದ ಹಕ್ಕುಗಳು, ಅದರ ಘಟಕಗಳು, ವಿಷಯ, ಪಠ್ಯ, ಫೋಟೋಗಳು, ಆಡಿಯೋಗಳು, ಆಡಿಯೋ-ವಿಶುವಲ್ಗಳು, ಸಾಹಿತ್ಯಕೃತಿ, ಕಲಾತ್ಮಕ ಕೆಲಸ, ನಿರ್ದಿಷ್ಟತೆಗಳು, ಸೂಚನೆಗಳು, ಅಮೂರ್ತಗಳು, ಸಾಫ್ಟ್ ವೇರ್, ಸೋರ್ಸ್ ಕೋಡ್, ಆಬ್ಜೆಕ್ಟ್ ಕೋಡ್, ಡೊಮೈನ್ ಹೆಸರು, ಆ್ಯಪ್ ಹೆಸರುಗಳು, ಮತ್ತು ಅದರಲ್ಲಿರುವ ಎಲ್ಲಾ ಅಂಶಗಳು, ಮಾಹಿತಿ ಮತ್ತು ವಸ್ತುಗಳು ("ಮೆಟೀರಿಯಲ್ಸ್") ಬೇಯರ್ ಮತ್ತು/ಅಥವಾ ಅದರ ಪರವಾನಗಿದಾರರ ಆಸ್ತಿಗಳಾಗಿವೆ. ಭಾರತದ ಕಾನೂನುಗಳು ಮತ್ತು ವಿಶ್ವದ ಇತರ ನ್ಯಾಯವ್ಯಾಪ್ತಿಗಳ ಅಡಿಯಲ್ಲಿ ಲೈಸೆನ್ಸ್ ಗಳನ್ನು ರಕ್ಷಿಸಲ್ಪಟ್ಟಿವೆ. ಬೇಯರ್ ಪೂರ್ಣ, ಸಂಪೂರ್ಣ ಹಕ್ಕುಗಳು, ಶೀರ್ಷಿಕೆ ಮತ್ತು ಅರ್ಜಿಯಲ್ಲಿ ಆಸಕ್ತಿ ಮತ್ತು ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಅದರಲ್ಲಿರುವ ಇತರ ಸ್ವಾಮ್ಯದ ಹಕ್ಕುಗಳನ್ನು ಉಳಿಸಿಕೊಂಡಿದೆ.
ಹೊಣೆಗಾರಿಕೆಯ ಮಿತಿ
ಗುಣಮಟ್ಟತೆ, ಸೂಕ್ತತೆ, ನಿಖರತೆ, ವಿಶ್ವಾಸಾರ್ಹತೆ, ಸಂಪೂರ್ಣತೆ, ಸಮಯೋಚಿತತೆ, ಕಾರ್ಯಕ್ಷಮತೆ, ಸುರಕ್ಷತೆ, ಶೀರ್ಷಿಕೆ ಮತ್ತು ಮಾಹಿತಿ, ಸಲಹೆ, ಸಾಮಗ್ರಿಗಳು ಅಥವಾ ಪಟ್ಟಿಮಾಡಿದ ಅಥವಾ ಪ್ರದರ್ಶಿಸಿದ ಅಥವಾ ಒದಗಿಸಿದ ಉತ್ಪನ್ನಗಳು ಅಥವಾ ವಿಷಯ (ಉತ್ಪನ್ನ ಮಾಹಿತಿ ಮತ್ತು/ಅಥವಾ ವಿಶೇಷಣಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿಲ್ಲ)ಕ್ಕೆ ಸಂಬಂಧಿಸಿದಂತೆ ಉಲ್ಲಂಘನೆಯಾಗದಿರುವಿಕೆ ಅಥವಾ ಕಾನೂನುಬದ್ಧತೆ ಹಾಗು ಯಾವುದೇ ವಾರಂಟಿಗಳು ಅಥವಾ ಪ್ರಾತಿನಿಧ್ಯಗಳನ್ನು ಬೇಯರ್ ಸ್ಪಷ್ಟವಾಗಿ ನಿರಾಕರಿಸುತ್ತದೆ. ವಿಷಯ, ಸಲಹೆ ಮತ್ತು ಅಪ್ಲಿಕೇಶನ್ನಲ್ಲಿನ ತಪ್ಪುಗಳನ್ನು ತಪ್ಪಿಸಲು ಸಮಂಜಸವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ, ಅಪ್ಲಿಕೇಶನ್ ಮತ್ತು ಎಲ್ಲಾ ವಿಷಯ, ಮಾಹಿತಿ, ಸಾಫ್ಟ್ವೇರ್, ಉತ್ಪನ್ನಗಳು, ಸಲಹೆ, ಸೇವೆಗಳು, ವಸ್ತುಗಳು, ಬಳಕೆದಾರರ ವಿಷಯ ಮತ್ತು ಸಂಬಂಧಿತ ಗ್ರಾಫಿಕ್ಸ್ ಅನ್ನು 'ಇರುವಂತೆ' ಮತ್ತು 'ಇದ್ದಲ್ಲಿಂದಲೇ' ಯಾವುದೇ ರೀತಿಯ ಖಾತರಿಯಿಲ್ಲದೆ (ವ್ಯಕ್ತಪಡಿಸಿದ ಅಥವಾ ಸೂಚ್ಯ) ಒದಗಿಸಲಾಗಿದೆ.
ಅಪ್ಲಿಕೇಶನ್ ಮೂಲಕ ಲಭ್ಯವಿರುವ ಮಾಹಿತಿ, ಸಲಹೆ ಮತ್ತು ಶಿಫಾರಸುಗಳು ವೃತ್ತಿಪರ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಯನ್ನು ರೂಪಿಸಲು ಅಥವಾ ವೃತ್ತಿಪರ ತೀರ್ಪನ್ನು ಬದಲಿಸಲು ಉದ್ದೇಶಿಸಿಲ್ಲ. ಕಾನೂನಿನಿಂದ ಅನುಮತಿಸಲಾದ ಗರಿಷ್ಠ ಮಟ್ಟಿಗೆ, ಈ ಅಪ್ಲಿಕೇಶನ್ನಿಂದ ಅಥವಾ ಮೂಲಕ ನೀವು ಪಡೆಯುವ ಮಾಹಿತಿ / ಸಲಹೆ / ಶಿಫಾರಸುಗಳ ಬಳಕೆಗೆ ನೀವು ಸಂಪೂರ್ಣ ಅಪಾಯ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ. ಮತ್ತು ಎಲ್ಲಾ ಕ್ಲೈಮ್ಗಳು, ಕ್ರಿಯೆಗಳು, ನಷ್ಟಗಳು, ಹಾನಿಗಳಿಂದ ನಿರುಪಿ ಬೇಯರ್ ಅನ್ನು ರಕ್ಷಿಸಲು ಹಾಗು ನಷ್ಟ ಪರಿಹಾರ ಮಾಡುವುದರಿಂದ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದೀರಿ.
ಶಿಫಾರಸು ಮಾಡಿದ ಬೆಳೆ ಸಂರಕ್ಷಣಾ ಉತ್ಪನ್ನಗಳ ಕೃಷಿವಿಜ್ಞಾನ ಸಲಹೆ ಅಥವಾ ಬಳಕೆಯಿಂದ ಉಂಟಾಗುವ ಯಾವುದೇ ಪ್ರತಿಕೂಲ ಘಟನೆಗಳಿಗೆ ಬೇಯರ್ (ಅಥವಾ ಫಾರ್ಮ್ರೈಸ್) ಜವಾಬ್ದಾರರಾಗಿರುವುದಿಲ್ಲ, ಏಕೆಂದರೆ ಸಲಹೆ ಅಥವಾ ಶಿಫಾರಸುಗಳು ಬಳಕೆದಾರರು ಹಂಚಿಕೊಂಡ ಫೋಟೋಗಳನ್ನು ಮಾತ್ರ ಆಧರಿಸಿರುತ್ತವೆ ಮತ್ತು ಫೀಲ್ಡ್ ಸ್ಕೌಟಿಂಗ್/ಕ್ಷೇತ್ರದ ಪರಿಸ್ಥಿತಿ, ಶಿಫಾರಸು ಮಾಡಿದ ಉತ್ಪನ್ನಗಳ ಬಳಕೆ ಅಥವಾ ಇತರ ಯಾವುದೇ ಬೆಳವಣಿಗೆಗಳನ್ನು ಮೇಲ್ವಿಚಾರಣಿಗೆ ಒಳಗೊಂಡಿರುವುದಿಲ್ಲ, ಬೇಯರ್ (ಅಥವಾ ಫಾರ್ಮ್ರೈಸ್) ಯಾವುದೇ ಪ್ರತಿಕೂಲ ಘಟನೆಗಳಿಗೆ ಜವಾಬ್ದಾರನಾಗಿರುವುದಿಲ್ಲ ಏಕೆಂದರೆ ಶಿಫಾರಸು ಮಾಡಲಾದ ಕೆಲವು ಬೆಳೆ ಸಂರಕ್ಷಣಾ ಉತ್ಪನ್ನಗಳು ಮತ್ತು ಡೋಸೇಜ್ಗಳು ನಮ್ಮ ಪೋರ್ಟ್ಫೋಲಿಯೊದಲ್ಲಿ ಇಲ್ಲದಿರಬಹುದು ಮತ್ತು ಆದ್ದರಿಂದ ಸಾಮಾನ್ಯವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಶಿಫಾರಸುಗಳನ್ನು ನೀಡಲಾಗಿರುತ್ತದೆ.